ಜಯಂತ್ ಕಾಯ್ಕಿಣಿ ಎಂಬ ಸ್ಪೂರ್ತಿಸೆಲೆ
ಬಹುಷಃ ಈ ಪೀಳಿಗೆಯವರು ನಮ್ಮ ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕೆಂದರೆ ನಮ್ಮ ಚಿತ್ರರಂಗವು ಬೇರೆ ಎಲ್ಲ ಕಲಾಪ್ರಕಾರಗಳಿಗಿಂತ ಅತಿ ಹೆಚ್ಚು ಪ್ರಭಾವ ಬೀರುವ ಶಕ್ತಿ ಹೊಂದಿದೆ ಎನ್ನುವುದು ನನ್ನ ವೈಯುಕ್ತಿಕ ಅಭಿಮತ. ಇದಕ್ಕೆ ಕಾರಣ ಈ ಪೀಳಿಗೆಯಲ್ಲಿ ನಮ್ಮ ಜನ ಸಾಮಾನ್ಯವಾಗಿ ಮನರಂಜನೆಗೆ ಎಲ್ಲಕ್ಕಿಂತ ಮಿಗಿಲಾಗಿ ಚಿತ್ರ ವೀಕ್ಷಣೆಗೆ ಪ್ರಾಶಸ್ತ್ಯ ಕೊಡುವುದು ಎಂಬುದು ನನ್ನ ಅನಿಸಿಕೆ. ನಮ್ಮ ಕನ್ನಡ ಭಾಷೆಯ ಚಿತ್ರರಂಗ ಎಷ್ಟು ಎತ್ತರಕ್ಕೆ ಬೆಳೆಯುತ್ತದೆಯೊ, ನಮ್ಮ ಭಾಷೆಯ ಮೇಲೆ ಅಭಿಮಾನ ಹೊಂದುವವರ ಸಂಖ್ಯೆ ಅಷ್ಟೇ ವೇಗವಾಗಿ ಬೆಳೆಯುತ್ತದೆ ಎನ್ನುವುದು ನನ್ನ ನಂಬಿಕೆ.
ಈ ನಿಟ್ಟಿನಿಂದ ಇದನ್ನು promote ಮಾಡಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದ ಸಂಧರ್ಭದಲ್ಲಿ ನನಗೆ ಹೊಳೆದಿದ್ದೇನೆಂದರೆ ನಮ್ಮ ಚಿತ್ರರಂಗವು ಅನೇಕ ವಿಭಾಗಗಳಲ್ಲಿ ಇತರೆ ಚಿತ್ರರಂಗಗಳಿಗಿಂತ ಹಿಂದುಳಿದಿದ್ದರೂ, ಗೀತ ಸಾಹಿತ್ಯ ವಿಭಾಗದಲ್ಲಿ ಮಾತ್ರ ಅತ್ಯದ್ಭುತ ಎನ್ನುವಂತ ಸಾಧನೆ ಮಾಡಿದ್ದೇವೆ ಮತ್ತು ಮಾಡುತ್ತಿದ್ದೇವೆ. ಆದ್ದರಿಂದ ಕೆಲವೊಂದು ನನಗೆ ಇಷ್ಟವಾದಂತ ಸಾಹಿತ್ಯವನ್ನು ಇಲ್ಲಿ post ಮಾಡುವೆ. ಎಂದೋ ಯಾರೋ ಇದನ್ನು ಓದಿ ತಮ್ಮೊಳಗಿರುವ ಸಾಹಿತಿಯನ್ನು ಹೊರ ತರಲು ಇದು ಸ್ಪೂರ್ತಿಯಾಗಲೆಂದು ನನ್ನ ಆಶಯ.
ನನಗೆ ಈ ರೀತಿಯಲ್ಲೊಂದು ಬ್ಲಾಗ್ ಬರೆಯಬೇಕೆಂದು ಅನಿಸಬೇಕೆಂದರೆ ಅದರ credits ಸಂಪೂರ್ಣವಾಗಿ ಜಯಂತ್ ಕಾಯ್ಕಿಣಿಯವರಿಗೆ ಸಲ್ಲಬೇಕು. ಏಕೆಂದರೆ ಕನ್ನಡದಲ್ಲಿ ಇಷ್ಟು ಸುಂದರವಾದ ಪದಗಳಿವೆ ಎಂದು ನನಗೆ ತಿಳಿದದ್ದೆ ಅವರು ರಚಿಸಿದ ಗೀತೆಗಳನ್ನು ಕೇಳಿದ ಮೇಲೆ. ಸಾಮಾನ್ಯವಾಗಿ ಚಿತ್ರಗೀತೆಗಳಲ್ಲಿ ಬರುವ ಒಲವು, ಚೆಲುವು, ನೋವು, ನಲಿವು, ಹೂವು, ಸಾವು, ಪ್ರೀತಿ, ಪ್ರೇಮ, ಕಣ್ಣು ಇಂತಹದೇ ಪದಗಳು ಪದೇ ಪದೇ ಕೇಳಿ ಬೇಸತ್ತಿದ್ದ ಸಂಧರ್ಭದಲ್ಲಿ ಇವರ ರಚಿಸಿದ ಸಾಹಿತ್ಯವು ಹೊಸ ಚೈತನ್ಯ ತರುವಂತೆ ಕಾಣುತ್ತದೆ. ಇವರ ಗೀತೆಗಳು ಕೇಳಿದ ಮೇಲೆ ನನ್ನ ಆಡು ಭಾಷೆಯಲ್ಲಿ ಸಾಧ್ಯವಾದಷ್ಟು ಇಂತಹ ಕನ್ನಡ ಪದಗಳನ್ನೇ ಉಪಯೋಗಿಸಬೇಕು ಎನ್ನುವಷ್ಟು ಪ್ರಭಾವ ಬೀರಿದ್ದಾರೆ. ಆದ್ದರಿಂದ ಅವರ ರಚಿಸಿದ ಅನೇಕ ಅದ್ಭುತಗಳಲ್ಲಿ ಒಂದಾಗಿರುವ, ಆದರೆ ಅಷ್ಟೇನು popular ಆಗಿರದ ಈ ಗೀತೆಯನ್ನು ಆಯ್ದುಕೊಂಡಿದ್ದೇನೆ. ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು comment ಮಾಡಿ.
ಚಿತ್ರ : ಡ್ರಾಮ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಂಬಲದ ಹೂವನ್ನು, ಕಣ್ಣಲ್ಲೇ ಅರಳಿಸುತ ಅಂಗಳದಿ ನಿಂತಿರುವ ಸಂಚಾರಿ
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ ಸ್ವಪ್ನವನು ತಂದಿರುವ ವ್ಯಾಪಾರಿ
ಬೆಳಿದೀತೇ ಆಸೆಗಳ ಈಯಾದಿ ಕಳೆದೀತೇ ನಡುವೆಲ್ಲೊ ಈ ಹಾದಿ
ಬೇಕೇನು ಈ ಪ್ರೀತಿ ಇತ್ಯಾದಿ???
ಹಿಡಿಯಷ್ಟು ಹ್ಹ್ರದಯದಲಿ ಹಿಡಿಸಲಾಗದೆ ಹೋದ ಮೌನವನು ಶ್ರುತಿ ಮಾಡೋ ವ್ಯಾಯಾಮವೇಕೆ???
ಅಚ್ಚುಮೆಚ್ಚಾಗಿರುವ ಈ ಭಾವ ಸರತಿಯಲಿ ಅಚ್ಚಿನ ದೋಷಗಳು ಮೈದೋರಬೇಕೆ???
ಹರಿವಾಗ ಈ ಬಾಳು ನದಿಯಾಗೀ, ಇರಬೇಕೆ ನೀ ಸಣ್ಣ ಸುಳಿಯಾಗಿ, ಬೇಕೇನು ಈ ಪ್ರೀತಿ ಇತ್ಯಾದಿ???
ಹಂಬಲದ ಹೂವನ್ನು, ಊಊಊಊಊ
ಚಂದಿರನ ಮೊಗದಲ್ಲಿ ಕಂಬನಿಯ ಕಲೆಗಳಿವೆ ಉಂಟಲ್ಲ ಅದರಲ್ಲಿ ನಮಗೊಂದು ಪಾಠ
ಈ ಪುಟ್ಟ ಕಣ್ಗಳಲ್ಲಿ ಲೋಕವೇ ಬಿಂಬಿಸಲಿ ಮೋಹದಲ್ಲಿ ಸಂಕುಚಿತವಾದಿತೇ ನೋಟ
ಬಾಡಿತೇ ಈ ಜೀವ ಬಿಡಿಯಾಗಿ, ಬದುಕನ್ನೇ ನೋಡೋಣ ಇಡಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ??
ಹಂಬಲದ ಹೂವನ್ನು, ಕಣ್ಣಲ್ಲೇ ಅರಳಿಸುತ ಅಂಗಳದಿ ನಿಂತಿರುವ ಸಂಚಾರಿ
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ ಸ್ವಪ್ನವನು ತಂದಿರುವ ವ್ಯಾಪಾರಿ
ಬೆಳಿದೀತೇ ಆಸೆಗಳ ಈಯಾದಿ ಕಳೆದೀತೇ ನಡುವೆಲ್ಲೊ ಈ ಹಾದಿ
ಬೇಕೇನು ಈ ಪ್ರೀತಿ ಇತ್ಯಾದಿ???
No comments:
Post a Comment