Saturday, July 5, 2014

ಸನ್ಯಾಸಿ ಗೀತೆ

ಸನ್ಯಾಸಿ ಗೀತೆ (The song of a sannyasin)

ಆಧ್ಯಾತ್ಮ ಲೋಕದ ಉತ್ತುಂಗ ಶಿಖರವಾಗಿರುವ ಸ್ವಾಮಿ ವಿವೇಕಾನಂದರು ೧೮೯೫ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಇದ್ದಾಗ ರಚಿಸಿದ "The song of a sannyasin" ಗೀತೆಯು ಪ್ರಪಂಚದ ಯಾವುದೇ ಧರ್ಮದ ವ್ಯಕ್ತಿಯು ಸನ್ಯಾಸಿಯಾಗಬಯಸಿದರೆ ಅವರು ಓದಲೇಬೇಕಾದಂತಹ ಮಹಾನ್ ಗೀತೆಯಿದು. ಇದರಲ್ಲಿ ಬರುವ ಪ್ರತಿಯೊಂದು ಸಾಲು ಸಹ ಸನ್ಯಾಸಿ ಧರ್ಮದ ಪಾಲನೆಯ ಬಗೆ ಮತ್ತು ಅದರಿಂದ ವೈಯುಕ್ತಿಕ ಸಾಕ್ಷಾತ್ಕಾರ ಪಡೆಯುವ ಜೊತೆಗೆ ಪ್ರಪಂಚದಲ್ಲಿ ಮಾಡಬಹುದಾದಂತಹ ಸಾತ್ವಿಕ ಬದಲಾವಣೆಯನ್ನು ಅರ್ಥ ಮಾಡಿಸುತ್ತದೆ.
ಸನ್ಯಾಸಿಯಾಗಬಯಸುವವರಿಗೆ ದಾರಿದೀಪ, ಬ್ರಹ್ಮಚಾರಿಯಾಗಬಯಸುವವರಿಗೆ ಮೈಮನಗಳಲ್ಲಿ ಶಕ್ತಿ ಮತ್ತು ಚೈತನ್ಯ ತುಂಬುವಂತಹ ಅತ್ಯಧ್ಭುತ ಗೀತೆ ಇದು. ಇದರಷ್ಟು ಪರಿಣಾಮಕಾರಿಯಾಗಿ ಸನ್ಯಾಸಿ ಧರ್ಮದ ಆದರ್ಶ ತತ್ವಗಳನ್ನು ಎತ್ತಿ ತೋರುವಂತಹ ಮತ್ತೊಂದು ಗೀತೆ ಹಿಂದೆಂದು ಬಂದಿಲ್ಲ, ಮುಂದೆಂದು ಬರಲು ಸಾಧ್ಯವಿಲ್ಲ.


ಕನ್ನಡದಲ್ಲಿ ಗೀತೆಯು ಇಷ್ಟು ಅರ್ಥಪೂರ್ಣವಾಗಿ ಬರಲು ನಮ್ಮ ನಾಡು ಕಂಡ ಮಹಾನ್ ಸಾಹಿತಿ ಕುವೆಂಪುರವರು ಗೀತೆಯನ್ನು ಅನುವಾದಿಸಿರುವುದೆ ಕಾರಣ. ವಿವೇಕಾನಂದರ ಹಾಡಿನಲ್ಲಿ ವ್ಯಕ್ತಪಡಿಸಿರುವ ಭಾವನೆಗಳಲ್ಲಿ ಕಿಂಚಿತ್ತು ಕಳೆದುಹೋಗದ ಹಾಗೆ ಅನುವಾದಿಸಲು ಬಹುಷಃ ಕುವೆಂಪು ಅಲ್ಲದೇ ಮತ್ಯಾರಿಂದಲು ಸಾಧ್ಯವಿಲ್ಲ ವೆಂಬ ಭಾವನೆ ಹಾಡು ಕೇಳಿದ ನಂತರ ಸಹಜವಾಗಿ ಮೂಡುತ್ತದೆ.

ಏಳುಮೇಲೇಳೇಳುಸಾಧುವೇಹಾಡುಚಾಗಿಯಹಾಡನು
ಹಾಡಿನಿಂದೆಚ್ಚರಿಸುಮಲಗಿಹನಮ್ಮಈತಾಯ್ನಾಡನು
ದೂರದಡವಿಯೊಳ್ಎಲ್ಲಿಲೌಕಿಕವಿಷಯವಾಸನೆಹುಟ್ಟದೋ
ಎಲ್ಲಿಗಿರಿಗುಹೆಕಂದರದಬಳಿಜಗದಗಲಿಬಿಲಿತಟ್ಟದೊ
ಎಲ್ಲಿಕಾಮವುಸುಳಿಯದೊ, ಎಲ್ಲಿಜೀವವುತಿಳಿಯದೊ

ಕೀರ್ತಿಕಾಂಚನವೆಂಬುವಾಸೆಗಳಿಂದಜನಿಸುವಭ್ರಾಂತಿಯ
ಎಲ್ಲಿಆತ್ಮವುಪಡೆದುನಲಿವುದೊನಿಚ್ಚವಾಗಿಹಶಾಂತಿಯ
ನನ್ನಿಹರಿವನಂದವಾಹಿನಿಎಲ್ಲಿಸಂತತಹರಿವುದೊ
ಎಲ್ಲಿಎಡೆಬಿಡದಿರದತೃಪ್ತಿಯಜರಿನಿರಂತರಸುರಿವುದೊ

ಅಲ್ಲಿಮೂಡಿದಹಾಡನುಲಿಯೈವೀರಸನ್ಯಾಸಿ
ಅಲ್ಲಿಮೂಡಿದಹಾಡನುಲಿಯೈವೀರಸನ್ಯಾಸೀ... ಈಈಈಈಈಈಈಈಈ

ಓಂತತ್ಸತ್ಓಂ

ಬೆಳೆಯಕೊಯ್ವನುಬಿತ್ತಿದಾತನುಪಾಪಪಾಪಕೆಕಾರಣ
ವೃಕ್ಷಕಾರ್ಯಕೆಬೀಜಕಾರಣಪುಣ್ಯಪುಣ್ಯಕೆಕಾರಣ
ಹುಟ್ಟಿಮೈಒಡೆದಾತ್ಮಬಾಳಿನಬಲೆಯತಪ್ಪದೆಹೊರುವುದೊ
ಕಟ್ಟುಮೀರಿಹನಾಮನಿರುವನುಕಟ್ಟುಕಟ್ಟನೆಹೆರುವುದೊ
ಎಂದುಪಂಡಿತರೆಂಬರುಮೇಣ್ತತ್ವದರ್ಷಿಗಳೆಂಬರು

ಆದೊಡೆಏನಂತ್ಆತ್ಮವೆಂಬುದುನಾಮರೂಪಾತೀತವು
ಮುಕ್ತಿಬಂಧಗಳಿಲ್ಲದಾತ್ಮವುಸರ್ವನಿಯಮಾತೀತವು
ತತ್ವಮಸಿಯಂದರಿತುಸಾಗುವೆಹಾಡುಚಾಗಿಯಹಾಡನು

ಹಾಡಿನಿಂದೆಚ್ಚರಿಸುಮಲಗಿಹನಮ್ಮಈತಾಯ್ನಾಡನು
ಸಾರುಸಿಧ್ಧನೆವಿಶ್ವವರಿಯಲಿಹಾಡುಸನ್ಯಾಸಿ
ಸಾರುಸಿಧ್ಧನೆವಿಶ್ವವರಿಯಲಿಹಾಡುಸನ್ಯಾಸಿ

ಓಂತತ್ಸತ್ಓಂ

ಶಾಂತಿಸರ್ವರಿಗಿರಲಿಉಲಿಯೈಜೀವಜಂತುಗಳಾಳಿಗೆ
ಹಿಂಸೆಯಾಗದೆಇರಲಿಎನ್ನೆಂದೆಲ್ಲಸೊಗದಲಿಬಾಳುಗೆ
ಬಾನೊಳಾಡುವನೆಲದೋಳೋಡುವಸರ್ವರಾತ್ಮನುನಾನಹೇ
ನಾಗನರಕಗಳಾಸೆಭಯಗಳನ್ನೆಲಮನದಿಂದೂಡುವೆ
ದೇಹಬಾಳಲಿಬೀಳಲಿಅದುಕರ್ಮನದಿಯಲಿತೇಲಲಿ
ಕೆಲರುಹಾರಗಳಿಂದಸಿಂಗರಿಸದನುಪೂಜಿಸಿಬಾಗಲಿ
ಕೆಲರುಕಾಲಿಂದೊದೆದುನೂಕಲಿಹುಡಿಯುಹುಡಿಯೊಳೆಹೋಗಲಿ
ಎಲ್ಲಹೊಂದಿರಲಾರುಹೊಗಳುವರಾರುಹೊಗಳಿಸಿಕೊಂಬರು
ನಿಂದೆನಿಂದಿಪರೆಲ್ಲಕೂಡಲುಯಾರುನಿಂದೆಯನುಂಬರು
ಪಾಶದಳತಡಿಪಿಸಿಡುಪಿತ್ತಡಿಹಾಡುಸನ್ಯಾಸಿ
ಪಾಶದಳತಡಿಪಿಸಿಡುಪಿತ್ತಡಿಹಾಡುಸನ್ಯಾಸಿ... ಈಈಈಈಈಈ

ಓಂತತ್ಸತ್ಓಂ

ಎಲ್ಲಿಕಾಮಿನಿಎಲ್ಲಿಕಾಂಚನದಾಸೆನೆಲೆಯಾಗಿರುವುದೊ
ಸತ್ಯವೆಂಬುವುದಲ್ಲಿಸುಳಿಯದುಎಲ್ಲಿಕಾಮವುಇರುವುದೊ
ಅಲ್ಲಿಮುಕ್ತಿಯುನಾಚಿತೋರದುಎಲ್ಲಿಸುಳಿವುದೊಭೋಗವು
ಅಲ್ಲಿತೆರೆಯದುಮಾಯೆಬಾಗಿಲ, ಅಲ್ಲಿಉಧ್ಭವರೋಗವು
ಎಲ್ಲಿನೆಲೆಸದುಚಾಗವುದಿಟವಲ್ಲಿಸೇರದುಯೋಗವು

ಗಗನವೆಮನೆಹಸುರೆಹಾಸಿಗೆಮನೆಯುಸಾಲ್ವುದೆಚಾಗಿಗೆ
ಹಸಿಯೊಬಿಸಿಯೊವಿಧಿಯುಕೊಟ್ಟಆಹಾರವನ್ನವುಯೋಗಿಗೆ
ಏನುತಿಂದರೆಏನುಕುಡಿದರೆಏನುಆತ್ಮಗೆಕೊರತೆಯೆ
ಸರ್ವಪಾಪವತಿಂದುತೇಗುವಗಂಗೆಗೆಕೊಳೆಕೊರತೆಯೆ
ನೇನುಮಿಂಚೈನೇನುಸಿಡಿಲೈಮೊಳಗುಸನ್ಯಾಸಿ
ನೇನುಮಿಂಚೈನೇನುಸಿಡಿಲೈಮೊಳಗುಸನ್ಯಾಸಿ

ಓಂತತ್ಸತ್ಓಂ

ನಿಜವನರತಿವರೆಲ್ಲೊಕೆಲವರುನಗುವರುಳಿದವರೆಲ್ಲರು
ನಿನ್ನಕಂಡರೆಹೇಮಹಾತ್ಮನೆ, ಕುರುಡರೇನನುಬಲ್ಲರು
ಗಣಿಸದವರನುಹೋಗುಮುಕ್ತನೆ, ನೀನುಊರಿಂದೂರಿಗೆ
ಸೊಗವಬಯಸದೆಅಳಲಿಗಳುಕದೆಕತ್ತಲಲಿಸಂಚಾರಿಗೆ
ನಿನ್ನಬೆಳಕನುನೀಡೆಲೈಸಂಸಾರಮಾಯೆಯದೂಡೆಲೈ

ಇಂತುದಿನದಿನಕರ್ಮಶಕ್ತಿಯುಮುಗಿವವರೆಗುಸಾಗೆಲೈ
ನಾನುನೀನುಗಳಳಿದುಆತ್ಮದೊಳ್ಇಳಿದುಪಡೆಯೊಳುಹೋಗೆಲೈ
ಏಳುಮೇಲೇಳೇಳುಸಾಧುವೆಹಾಡುಚಾಗಿಯಹಾಡನು
ಹಾಡಿನಿಂದೆಚ್ಚರಿಸುಮಲಗಿಹನಮ್ಮಈತಾಯ್ನಾಡನು
ತತ್ವಮಸಿಯಂದರಿತುಹಾಡೈವೀರಸನ್ಯಾಸಿ
ತತ್ವಮಸಿಯಂದರಿತುಹಾಡೈವೀರಸನ್ಯಾಸಿ..ಈಈಈಈಈಈ

ಓಂತತ್ಸತ್ಓಂ
ಓಂತತ್ಸತ್ಓಂ
ಓಂತತ್ಸತ್ಓಂ
ಓಂತತ್ಸತ್ಓಂ
ಓಂತತ್ಸತ್ಓಂ

Saturday, March 8, 2014

ಜಯಂತ್ ಕಾಯ್ಕಿಣಿ ಎಂಬ ಸ್ಪೂರ್ತಿಸೆಲೆ


ಬಹುಷಃ ಈ ಪೀಳಿಗೆಯವರು ನಮ್ಮ ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕೆಂದರೆ ನಮ್ಮ ಚಿತ್ರರಂಗವು  ಬೇರೆ ಎಲ್ಲ ಕಲಾಪ್ರಕಾರಗಳಿಗಿಂತ ಅತಿ ಹೆಚ್ಚು ಪ್ರಭಾವ ಬೀರುವ ಶಕ್ತಿ ಹೊಂದಿದೆ ಎನ್ನುವುದು ನನ್ನ ವೈಯುಕ್ತಿಕ ಅಭಿಮತ. ಇದಕ್ಕೆ ಕಾರಣ ಈ ಪೀಳಿಗೆಯಲ್ಲಿ ನಮ್ಮ ಜನ ಸಾಮಾನ್ಯವಾಗಿ ಮನರಂಜನೆಗೆ ಎಲ್ಲಕ್ಕಿಂತ ಮಿಗಿಲಾಗಿ ಚಿತ್ರ ವೀಕ್ಷಣೆಗೆ ಪ್ರಾಶಸ್ತ್ಯ ಕೊಡುವುದು ಎಂಬುದು ನನ್ನ ಅನಿಸಿಕೆ. ನಮ್ಮ ಕನ್ನಡ ಭಾಷೆಯ ಚಿತ್ರರಂಗ ಎಷ್ಟು ಎತ್ತರಕ್ಕೆ ಬೆಳೆಯುತ್ತದೆಯೊ, ನಮ್ಮ ಭಾಷೆಯ ಮೇಲೆ ಅಭಿಮಾನ ಹೊಂದುವವರ ಸಂಖ್ಯೆ ಅಷ್ಟೇ ವೇಗವಾಗಿ ಬೆಳೆಯುತ್ತದೆ ಎನ್ನುವುದು ನನ್ನ ನಂಬಿಕೆ.

ಈ ನಿಟ್ಟಿನಿಂದ ಇದನ್ನು promote ಮಾಡಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದ ಸಂಧರ್ಭದಲ್ಲಿ ನನಗೆ ಹೊಳೆದಿದ್ದೇನೆಂದರೆ ನಮ್ಮ ಚಿತ್ರರಂಗವು ಅನೇಕ ವಿಭಾಗಗಳಲ್ಲಿ ಇತರೆ ಚಿತ್ರರಂಗಗಳಿಗಿಂತ ಹಿಂದುಳಿದಿದ್ದರೂ, ಗೀತ ಸಾಹಿತ್ಯ ವಿಭಾಗದಲ್ಲಿ ಮಾತ್ರ ಅತ್ಯದ್ಭುತ ಎನ್ನುವಂತ ಸಾಧನೆ ಮಾಡಿದ್ದೇವೆ ಮತ್ತು ಮಾಡುತ್ತಿದ್ದೇವೆ. ಆದ್ದರಿಂದ ಕೆಲವೊಂದು ನನಗೆ ಇಷ್ಟವಾದಂತ ಸಾಹಿತ್ಯವನ್ನು ಇಲ್ಲಿ post ಮಾಡುವೆ. ಎಂದೋ ಯಾರೋ ಇದನ್ನು ಓದಿ ತಮ್ಮೊಳಗಿರುವ ಸಾಹಿತಿಯನ್ನು ಹೊರ ತರಲು ಇದು ಸ್ಪೂರ್ತಿಯಾಗಲೆಂದು ನನ್ನ ಆಶಯ.

ನನಗೆ ಈ ರೀತಿಯಲ್ಲೊಂದು ಬ್ಲಾಗ್ ಬರೆಯಬೇಕೆಂದು ಅನಿಸಬೇಕೆಂದರೆ ಅದರ credits ಸಂಪೂರ್ಣವಾಗಿ ಜಯಂತ್ ಕಾಯ್ಕಿಣಿಯವರಿಗೆ ಸಲ್ಲಬೇಕು. ಏಕೆಂದರೆ ಕನ್ನಡದಲ್ಲಿ ಇಷ್ಟು ಸುಂದರವಾದ ಪದಗಳಿವೆ ಎಂದು ನನಗೆ ತಿಳಿದದ್ದೆ ಅವರು ರಚಿಸಿದ ಗೀತೆಗಳನ್ನು ಕೇಳಿದ ಮೇಲೆ. ಸಾಮಾನ್ಯವಾಗಿ ಚಿತ್ರಗೀತೆಗಳಲ್ಲಿ ಬರುವ ಒಲವು, ಚೆಲುವು, ನೋವು, ನಲಿವು, ಹೂವು, ಸಾವು, ಪ್ರೀತಿ, ಪ್ರೇಮ, ಕಣ್ಣು ಇಂತಹದೇ ಪದಗಳು ಪದೇ ಪದೇ ಕೇಳಿ ಬೇಸತ್ತಿದ್ದ ಸಂಧರ್ಭದಲ್ಲಿ ಇವರ ರಚಿಸಿದ ಸಾಹಿತ್ಯವು ಹೊಸ ಚೈತನ್ಯ ತರುವಂತೆ ಕಾಣುತ್ತದೆ. ಇವರ ಗೀತೆಗಳು ಕೇಳಿದ ಮೇಲೆ ನನ್ನ ಆಡು ಭಾಷೆಯಲ್ಲಿ ಸಾಧ್ಯವಾದಷ್ಟು ಇಂತಹ ಕನ್ನಡ ಪದಗಳನ್ನೇ ಉಪಯೋಗಿಸಬೇಕು ಎನ್ನುವಷ್ಟು ಪ್ರಭಾವ ಬೀರಿದ್ದಾರೆ. ಆದ್ದರಿಂದ ಅವರ ರಚಿಸಿದ ಅನೇಕ ಅದ್ಭುತಗಳಲ್ಲಿ ಒಂದಾಗಿರುವ, ಆದರೆ ಅಷ್ಟೇನು popular ಆಗಿರದ ಈ ಗೀತೆಯನ್ನು ಆಯ್ದುಕೊಂಡಿದ್ದೇನೆ. ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು comment ಮಾಡಿ.

ಚಿತ್ರ  : ಡ್ರಾಮ
ಸಾಹಿತ್ಯ: ಜಯಂತ್ ಕಾಯ್ಕಿಣಿ

ಹಂಬಲದ ಹೂವನ್ನು, ಕಣ್ಣಲ್ಲೇ ಅರಳಿಸುತ ಅಂಗಳದಿ ನಿಂತಿರುವ ಸಂಚಾರಿ
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ ಸ್ವಪ್ನವನು ತಂದಿರುವ ವ್ಯಾಪಾರಿ

ಬೆಳಿದೀತೇ ಆಸೆಗಳ ಈಯಾದಿ ಕಳೆದೀತೇ ನಡುವೆಲ್ಲೊ ಈ ಹಾದಿ
ಬೇಕೇನು ಈ ಪ್ರೀತಿ ಇತ್ಯಾದಿ???

ಹಿಡಿಯಷ್ಟು ಹ್ಹ್ರದಯದಲಿ ಹಿಡಿಸಲಾಗದೆ ಹೋದ ಮೌನವನು ಶ್ರುತಿ ಮಾಡೋ ವ್ಯಾಯಾಮವೇಕೆ???
ಅಚ್ಚುಮೆಚ್ಚಾಗಿರುವ ಈ ಭಾವ ಸರತಿಯಲಿ ಅಚ್ಚಿನ ದೋಷಗಳು ಮೈದೋರಬೇಕೆ???

ಹರಿವಾಗ ಈ ಬಾಳು ನದಿಯಾಗೀ, ಇರಬೇಕೆ ನೀ ಸಣ್ಣ ಸುಳಿಯಾಗಿ, ಬೇಕೇನು ಈ ಪ್ರೀತಿ ಇತ್ಯಾದಿ???
ಹಂಬಲದ ಹೂವನ್ನು, ಊಊಊಊಊ

ಚಂದಿರನ ಮೊಗದಲ್ಲಿ ಕಂಬನಿಯ ಕಲೆಗಳಿವೆ ಉಂಟಲ್ಲ ಅದರಲ್ಲಿ ನಮಗೊಂದು ಪಾಠ
ಈ ಪುಟ್ಟ ಕಣ್ಗಳಲ್ಲಿ ಲೋಕವೇ ಬಿಂಬಿಸಲಿ ಮೋಹದಲ್ಲಿ ಸಂಕುಚಿತವಾದಿತೇ ನೋಟ

ಬಾಡಿತೇ ಈ ಜೀವ ಬಿಡಿಯಾಗಿ, ಬದುಕನ್ನೇ ನೋಡೋಣ ಇಡಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ??

ಹಂಬಲದ ಹೂವನ್ನು, ಕಣ್ಣಲ್ಲೇ ಅರಳಿಸುತ ಅಂಗಳದಿ ನಿಂತಿರುವ ಸಂಚಾರಿ
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ ಸ್ವಪ್ನವನು ತಂದಿರುವ ವ್ಯಾಪಾರಿ
ಬೆಳಿದೀತೇ ಆಸೆಗಳ ಈಯಾದಿ ಕಳೆದೀತೇ ನಡುವೆಲ್ಲೊ ಈ ಹಾದಿ
ಬೇಕೇನು ಈ ಪ್ರೀತಿ ಇತ್ಯಾದಿ???

Wednesday, February 26, 2014

Tracking and Measuring your habits and strengths

How many times have we all wondered what makes others do a task easily while we struggle at mastering it. Some friends might look at a task like it is a piece of cake to them while we are open our mouth in surprise and sit and wonder why can't I ? 

I have no intention of giving a right answer right away in this first post of mine but I would like to share a thing which I have been experimenting for a while and has produced satisfying results so far. Here it is."The thing on which we spend considerable amount of time is the thing on which we will be an expert."

Well, I know I did not tell something very catchy or unique but let me try to explain why I said this.The thing on which we spend considerable amount of time per day is the thing we will be good at. As simple as that.All we need to do is measure. We just need to measure how much time will we be spending on what. We need to do this for a month. The longer the duration of measure,more accurate the results.

  • Say you have spent 1 hour each day consistently in a gym working out for the past two years, then I am sure you would be having a great athletic body.
  • Say you are spending 5 hours, I mean 5 quality hours every single day on the job you do at office without getting distracted by Whatsapp, Social media, News sites, E-commerce sites etc etc which do not add anything to productivity. I am sure you must be a star employee if you have satisfied this criteria.
  • Say you are spending most of your lonely time thinking on negative things that might happen in future. Then I can almost be sure you would face emotional problems.
  • Say you are spending the same lonely time on personal development by reading self help books or browsing good sites that might help you come out of your problems or that might motivate you or do something that keeps you happy. Then I am sure you will be liked at least by few close people, if not everyone.
So, what I am trying to tell is if you want to be good at something just measure how much time you are spending on that thing every single day. You will be able to realize yourself when you might be able to achieve that particular thing in life. I believe every achievement in this world boils down to perseverance. Just keep tracking how long you persisted on a thing without getting distracted. Let it start with as low as with just 1 minute per day. Gradually improve it. You will be an expert at it someday in future. But do not forget to measure every single day. Period.

Quote:I fear not the man who has practiced 10,000 kicks once, but I fear the man who has practiced one kick 10,000 times   - Bruce Lee